88 - Al-Ghaashiya ()

|

(1) ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ?

(2) ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.

(3) (ಮತ್ತು) ಪರಿಶ್ರಮ ಪಟ್ಟವು ಬಳಲಿರುವುವು.

(4) ಅವರು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವರು.

(5) ಕುದಿಯುತ್ತಿರುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.

(6) ಅವರಿಗೆ ಮುಳ್ಳು ತುಂಬಿದ ಗಿಡಗಳ ಹೊರತು ಬೇರಾವ ಆಹಾರವಿರದು.

(7) ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.

(8) ಹಲವು ಮುಖಗಳು ಅಂದು ರ‍್ಷಭರಿತವಾಗಿರುವುದು.

(9) ಅವುಗಳು ತಮ್ಮ (ಭೂಲೋಕದ) ಪರಿಶ್ರಮದ ಕುರಿತು ಸಂತೃಪ್ತವಾಗಿರುವುವು.

(10) ಉನ್ನತವಾದ ಸ್ರ‍್ಗಗಳಲ್ಲಿರುವುವು.

(11) ಅದರಲ್ಲಿ ಯಾವ ವ್ರ‍್ಥ ಮಾತನ್ನು ಅವರು ಕೇಳಲಾರರು.

(12) ಹರಿಯುತ್ತಿರುವ ಚಿಲುಮೆಯಿರುವುದು.

(13) ಉನ್ನತವಾದ ಮಂಚಗಳಿರುವುವು.

(14) ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.

(15) ಸಾಲಾಗಿಡಲಾದ ಒರಗು ದಿಂಬುಗಳಿರುವುವು.

(16) ಮತ್ತು ಹಾಸಲಾದ ರತ್ನಗಂಬಳಿಗಳಿರುವುವು.

(17) ಏನು ಅವರು ಒಂಟೆಯೆಡೆಗೆ ನೋಡುವುದಿಲ್ಲವೇ, ಅದು ಹೇಗೆ ವಿಚಿತ್ರವಾಗಿ ಸೃಷ್ಟಿಸಲಾಗಿದೆಯೆಂದು ?

(18) ಮತ್ತು ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲಾಗಿದೆಯೆಂದು ?

(19) ಮತ್ತು ರ‍್ವತಗಳೆಡೆಗೆ ಅವುಗಳನ್ನು ಹೇಗೆ ನಾಟಲಾಗಿದೆಯೆಂದು ?

(20) ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?

(21) ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ

(22) ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.

(23) ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.

(24) ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.

(25) ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.

(26) ಬಳಿಕ ನಿಸ್ಸಂಶಯವಾಗಿಯೂ ಅವರ ವಿಚಾರಣೆಯ ಹೊಣೆ ನಮ್ಮ ಮೇಲೆ ಇದೆ.