(1) ಪ್ರಭಾತದಾಣೆ
(2) ಮತ್ತು ಹತ್ತು ರಾತ್ರಿಗಳಾಣೆ
(3) ಸಮ ಮತ್ತು ವಿಷಮಗಳಾಣೆ.
(4) ಸಂಚಲಿತ ರಾತ್ರಿಯಾಣೆ
(5) ಬುದ್ಧಿವಂತರಿಗೆ ಇವುಗಳಲ್ಲಿ ಸಾಕಷ್ಟು ಆಣೆಯಿಲ್ಲವೇ?
(6) ಆದ್ ಸಮುದಾಯದವರೊಂದಿಗೆ ನಿಮ್ಮ ಪ್ರಭು ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ?
(7) ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.
(8) ಅಂತಹ ಜನಾಂಗವನ್ನು ಯಾವ ನಾಡುಗಳಲ್ಲಿಯು ಸೃಷ್ಟಿಸಲಾಗಿಲ್ಲ.
(9) ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.
(10) ಮತ್ತು ಮೊಳೆಗಳವನಾಗಿದ್ದ ಫಿರ್ಔನ್ನೊಂದಿಗೆ.
(11) ಅವರೆಲ್ಲರೂ ನಾಡುಗಳಲ್ಲಿ ಅತಿರೇಕವೆಸಗುತ್ತಿದ್ದರು.
(12) ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.
(13) ಆಗ ನಿಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬಾರಿಸಿದನು.
(14) ಖಂಡಿತವಾಗಿಯೂ ನಿಮ್ಮ ಪ್ರಭು ಹೊಂಚಿನಲ್ಲಿದ್ದಾನೆ.
(15) ಆದರೆ ಮನುಷ್ಯನನ್ನು ಅವನ ಪ್ರಭು ಅವನನ್ನು ಪರೀಕ್ಷಿಸಲು ಗೌರವ ಹಾಗು ಅನುಗ್ರಹವನ್ನು ನೀಡಿದರೆ ಅವನು ನನ್ನ ಪ್ರಭುವು ನನ್ನನ್ನು ಗೌರವಿಸಿದನು ಎಂದು ಹೇಳತೊಡಗುತ್ತಾನೆ.
(16) ಮತ್ತು ಅವನನ್ನು ಪರೀಕ್ಷಿಸಲು, ಅವನ ಜೀವನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ನನ್ನ ಪ್ರಭು ನನ್ನನ್ನು ಅಪಮಾನಿಸಿ ಬಿಟ್ಟನು ಎಂದು ಹೇಳುತ್ತಾನೆ.
(17) ಖಂಡಿತವಾಗಿಯೂ ನಿಮ್ಮ ನಿಲುವು ಸರಿಯಿಲ್ಲ ನೀವು ಅನಾಥರನ್ನು ಗೌರವಿಸುವುದಿಲ್ಲ.
(18) ಬಡವರಿಗೆ ಉಣಬಡಿಸಲು ನೀವು ಪರಸ್ಪರರನ್ನು ಪ್ರೇರೇಪಿಸುವುದಿಲ್ಲ.
(19) ಮತ್ತು ನೀವು ವಾರೀಸು ಸೊತ್ತನ್ನು ಕಬಳಿಸಿ ಬಿಡುತ್ತೀರಿ.
(20) ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.
(21) ಖಂಡಿತವಾಗಿಯೂ ಭೂಮಿಯನ್ನು ನಿರಂತರವಾಗಿ ಗುದ್ದಿ ಪುಡಿಗಟ್ಟಿಸಲಾದಾಗ.
(22) ಮಲಕ್ಗಳು ಸಾಲುಸಾಲಾಗಿ ನಿಂತಿರುವ ಸ್ಥಿತಿಯಲ್ಲಿ ನಿಮ್ಮ ಪ್ರಭು ಬರುವನು.
(23) ನರಕವನ್ನು ಮುಂದೆತರಲಾಗುವ ದಿನ ಮನುಷ್ಯನು ಮನವರಿಕೆ ಮಾಡಿಕೊಳ್ಳುವನು. ಆದರೆ ಅವನು ಅಂದು ಮನವರಿಕೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನು ?
(24) ಅವನು ಹೇಳುವನು, ಅಯ್ಯೋ ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಮುಂಚೆಯೇ ಮಾಡಿರುತ್ತಿದ್ದರೆ !
(25) ಆದರೆ ಅಂದು ಅಲ್ಲಾಹನು ಶಿಕ್ಷಿಸಿದಂತೆ ಬೇರಾರೂ ಶಿಕ್ಷಿಸಲಾರರು.
(26) ಅವನು ಕಟ್ಟುವ ರೀತಿಯಲ್ಲಿ ಬೇರಾರೂ ಕಟ್ಟಲಾರರು.
(27) ಓ ಶಾಂತಿಪಡೆದ ಆತ್ಮವೇ,
(28) ನೀನು ಅವನಿಂದ ಸಂತೃಪ್ತನಾಗಿ ಮತ್ತು ಅವನು ನಿನ್ನಿಂದ ಸಂತುಷ್ಟನಾಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನೆಡೆಗೆ ಮರಳು.
(29) ತರುವಾಯ ನನ್ನ ಸಜ್ಜನದಾಸರೊಂದಿಗೆ ಸೇರಿಕೋ.
(30) ಮತ್ತು ನನ್ನ ಸ್ರ‍್ಗವನ್ನು ಪ್ರವೇಶಿಸು.