90 - Al-Balad ()

|

(1) ನಾನು ಈ ಮಕ್ಕಾ ನಗರದ ಮೇಲೆ ಆಣೆ ಹಾಕುತ್ತೇನೆ.

(2) ನೀವು ಈ ನಗರದ ನಿವಾಸಿಯಾಗಿರುವಿರಿ.

(3) ತಂದೆ ಹಾಗು ಮಕ್ಕಳಾಣೆ.

(4) ಖಂಡಿತವಾಗಿಯೂ ನಾವು ಮನುಷ್ಯನನ್ನು ಸಂಕಷ್ಟದೊಂದಿಗೆ ಸೃಷ್ಟಿಸಿರುತ್ತೇವೆ.

(5) ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೆಂದು ಅವನು ಭಾವಿಸುತ್ತಿರುವನೇ ?

(6) ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.

(7) ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?

(8) ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?

(9) ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?

(10) ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.

(11) ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.

(12) ಆ ದರ‍್ಗಮ ಮರ‍್ಗ ಏನೆಂದು ನಿಮಗೇನುಗೊತ್ತು ?

(13) ಯಾವುದಾದರೂ ಕೊರಳು (ಗುಲಾಮ,) ಸ್ವತಂತ್ರಗೊಳಿಸುವುದಾಗಿದೆ.

(14) ಅಥವಾ ಹಸಿವಿನ ದಿನದಲ್ಲಿ

(15) ಸಂಬಂಧಿಕ ಅನಾಥನಿಗೆ.

(16) ಅಥವಾ ದಿಕ್ಕೆಟ್ಟ ಬಡವನಿಗೆ ಉಣಬಡಿಸುವುದಾಗಿದೆ.

(17) ಬಳಿಕ ಅವನು ವಿಶ್ವಾಸವಿಟ್ಟವರ ಪರಸ್ಪರ ಸಹನೆ ಮತ್ತು ಕರುಣೆ ತೋರುವ ಉಪದೇಶ ನೀಡುವವರ ಪೈಕಿ ಸೇರಿದವನಾಗುವುದಾಗಿದೆ.

(18) ಅವರೇ ಬಲಗಡೆಯವರು

(19) ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.

(20) ಅವರ ಮೇಲೆ ಎಲ್ಲಾ ಕಡೆಯಿಂದಲೂ ನರಕಾಗ್ನಿಯು ಆವರಿಸಿ ಮುಚ್ಚಿ ಕೊಂಡಿರುವುದು.