(1) ಸರ‍್ಯ ಮತ್ತು ಅದರ ಪ್ರಭೆಯಾಣೆ.
(2) ಚಂದ್ರನಾಣೆ, ಅದು ಸರ‍್ಯನನ್ನು ಹಿಂಬಾಲಿಸಿದಾಗ.
(3) ಹಗಲಿನಾಣೆ, ಅದು ಸರ‍್ಯನನ್ನು ಪ್ರತ್ಯಕ್ಷಗೊಳಿಸುವಾಗ.
(4) ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.
(5) ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
(6) ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
(7) ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.
(8) ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
(9) ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
(10) ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
(11) ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
(12) ಅವರ ಪೈಕಿ ದೊಡ್ಡ ನತದೃಷ್ಟನೊಬ್ಬನು ಎದ್ದು ನಿಂತ ಸಂರ‍್ಭ.
(13) ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
(14) ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
(15) ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.