(1) ನಾವು ನಿಮಗಾಗಿ ನಿಮ್ಮ ಹೃದಯವನ್ನು ವಿಶಾಲಗೊಳಿಸಲಿಲ್ಲವೇ ?
(2) ಮತ್ತು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಲಿಲ್ಲವೇ ?
(3) ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.
(4) ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.
(5) ಆದ್ದರಿಂದ ಖಂಡಿತವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
(6) ನಿಸ್ಸಂಶಯವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
(7) ಆದ್ದರಿಂದ ನಿಮಗೆ ಬಿಡುವಾದಾಗಲೆಲ್ಲಾ ಆರಾಧನೆಯಲ್ಲಿ ಪರಿಶ್ರಮ ಪಡಿರಿ.
(8) ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.