(1) ಗ್ರಂಥದವರಲ್ಲಿ ಸತ್ಯನಿಷÃಧಿಸಿದವರು ಮತ್ತು ಬಹುದೇವಾರಾಧಕರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯು ಬರುವತನಕ (ತಮ್ಮ ನಿಷೇಧ ನೀತಿಯನ್ನು) ಕೈ ಬಿಡುವವರಾಗಿರಲಿಲ್ಲ.
(2) (ಆ ಪುರಾವೆ) ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕನು ಪರಿಶುದ್ಧ ಹೊತ್ತಿಗೆಗಳನ್ನು ಓದಿಕೊಡುವ ತನಕ.
(3) ೩. ಅವುಗಳಲ್ಲಿ ನೇರ ಸರಳ ಲಿಖಿತ ನಿಯಮಗಳಿವೆ.
(4) ಗ್ರಂಥ ನೀಡಲಾದವರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆ ಬಂದ ನಂತರವೇ (ಹಟ ಮತ್ತು ಅಸೂಯೆಯಿಂದ) ಭಿನ್ನಾಭಿಪ್ರಾಯಕ್ಕೆ ಒಳಗಾದರು.
(5) ವಾಸ್ತವದಲ್ಲಿ ಅವರಿಗೆ ನೀಡಲಾದ ಆದೇಶವು ಏಕನಿಷ್ಟರಾಗಿ ಅಲ್ಲಾಹನಿಗೆ ರ‍್ಮವನ್ನು ಮೀಸಲಿಟ್ಟು ಅವನನ್ನೇ ಆರಾಧಿಸಿರಿ ಮತ್ತು ನಮಾಜ್ ಸಂಸ್ಥಾಪಿಸಿರಿ, ಜಕಾತ್ ನೀಡಿರಿ, ಎಂಬುದರ ಹೊರತು ಬೇರೇನೂ ಆಗಿರಲಿಲ್ಲ ಇದುವೇ ಋಜುವಾದ ರ‍್ಮವಾಗಿದೆ.
(6) ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ ನಿಕೃಷ್ಟ ಸೃಷ್ಟಿಗಳು.
(7) ನಿಸ್ಸಂಶಯವಾಗಿಯೂ ಸತ್ಯ ವಿಶ್ವಾಸವಿಟ್ಟವರು ಮತ್ತು ಸತ್ರ‍್ಮವೆಸಗಿದವರು, ಇವರೇ ಅತ್ಯುತ್ತಮ ಸೃಷ್ಟಿಗಳು.
(8) ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಶಾಶ್ವತವಾಗಿರುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಇದು ತನ್ನ ಪ್ರಭುವನ್ನು ಭಯಪಡುವವನಿಗೆ ಇರುವ ಪ್ರತಿಫಲವಾಗಿದೆ.