(1) ಚುಚ್ಚಿ ಮಾತನಾಡುವವನೂ, ಮೂದಲಿಸುವ ವನೂ ಆಗಿರುವ ಪ್ರತಿಯೊಬ್ಬನಿಗೂ ನಾಶವಿದೆ.
(2) ಅಂದರೆ ಸಂಪತ್ತನ್ನು ಕೂಡಿಡುವವನೂ, ಅದನ್ನು ಎಣಿಸುತ್ತಿರುವವನೂ ಆಗಿರುವವನಿಗೆ.
(3) ಅವನ ಸಂಪತ್ತು ಅವನಿಗೆ ಶಾಶ್ವತ ಬದುಕನ್ನು ನೀಡಿದೆ ಎಂದು ಅವನು ಭಾವಿಸುತ್ತಿರುವನು.
(4) ಅನುಮಾನವೇ ಇಲ್ಲ, ಖಂಡಿತವಾಗಿಯೂ ಅವನನ್ನು ಹುತಮಃದಲ್ಲಿ ಎಸೆಯಲಾಗುವುದು.
(5) ಹುತಮಃ ಎಂದರೇನೆಂದು ತಮಗೆ ಗೊತ್ತಿದೆಯೇ?
(6) ಅದು ಹೊತ್ತಿ ಜ್ವಲಿಸಲಾದ ಅಲ್ಲಾಹುವಿನ ಅಗ್ನಿಯಾಗಿದೆ.
(7) ಅದು ಹೃದಯಗಳೆಡೆಗೆ ನೆಗೆಯುತ್ತದೆ.
(8) ಖಂಡಿತವಾಗಿಯೂ ಅದು ಅವರ ಮೇಲೆ ಮುಚ್ಚಿಕೊಂಡಿರುವುದು.
(9) ಚಾಚಲಾಗಿರುವ ಸ್ಥಂಭಗಳಲ್ಲಿ.