91 - Ash-Shams ()

|

(1) ಸೂರ್ಯ ಮತ್ತು ಅದರ ಪ್ರಭೆಯ ಮೇಲಾಣೆ!

(2) ಚಂದ್ರನ ಮೇಲಾಣೆ! ಅದು ಅದನ್ನು ಹಿಂಬಾಲಿಸಿ ಬರುವಾಗ.

(3) ಹಗಲಿನ ಮೇಲಾಣೆ! ಅದು ಅದನ್ನು (ಸೂರ್ಯನನ್ನು) ಪ್ರತ್ಯಕ್ಷಗೊಳಿಸುವಾಗ.

(4) ರಾತ್ರಿಯ ಮೇಲಾಣೆ! ಅದು ಅದನ್ನು ಮುಚ್ಚುವಾಗ.

(5) ಆಕಾಶ ಮತ್ತು ಅದನ್ನು ಸ್ಥಾಪಿಸಿದ ವಿಧಾನದ ಮೇಲಾಣೆ!

(6) ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದ ವಿಧಾನದ ಮೇಲಾಣೆ!

(7) ಮನುಷ್ಯ ಮನಸ್ಸು ಮತ್ತು ಅದನ್ನು ವ್ಯವಸ್ಥಿತಗೊಳಿಸಿದ ವಿಧಾನದ ಮೇಲಾಣೆ.!

(8) ತರುವಾಯ ಅವನು ಅದಕ್ಕೆ ಅದರ ದುಷ್ಟತೆಯನ್ನೂ, ಶಿಷ್ಟತೆಯನ್ನೂ ತಿಳಿಸಿಕೊಟ್ಟನು.(1403)
1403. ಧರ್ಮ ಮತ್ತು ಅಧರ್ಮದ ಬಗ್ಗೆಯಿರುವ ಪ್ರಜ್ಞೆಯನ್ನು ಅಲ್ಲಾಹು ಮನುಷ್ಯ ಪ್ರಕೃತಿಯಲ್ಲೇ ನಿಕ್ಷೇಪಿಸಿದ್ದಾನೆ.

(9) ಖಂಡಿತವಾಗಿಯೂ ಅದನ್ನು (ಶರೀರವನ್ನು) ಪರಿಶುದ್ಧಗೊಳಿಸಿದವನು ಯಶಸ್ವಿಯಾದನು.

(10) ಅದನ್ನು ಮಲಿನಗೊಳಿಸಿದವನು ಖಂಡಿತವಾಗಿಯೂ ಪರಾಭವಗೊಂಡನು.

(11) ಸಮೂದ್ ಜನಾಂಗವು ತನ್ನ ಧಿಕ್ಕಾರದ ನಿಮಿತ್ತ (ಸತ್ಯವನ್ನು) ನಿಷೇಧಿಸಿತು.

(12) ಅವರ ಪೈಕಿ ಅತ್ಯಂತ ದುಷ್ಟನು ಸೆಟೆದು ನಿಂತಾಗ.

(13) ಆಗ ಅಲ್ಲಾಹುವಿನ ಸಂದೇಶವಾಹಕರು ಅವರೊಂದಿಗೆ ಹೇಳಿದರು: ‘ಅಲ್ಲಾಹುವಿನ ಒಂಟೆಯ ಬಗ್ಗೆ ಮತ್ತು ಅದರ ಜಲಪಾನದ ಬಗ್ಗೆ (ಎಚ್ಚರವಹಿಸಿರಿ).(1404)
1404. 7/73-79, 11/64-66, 26/155-158 ಸೂಕ್ತಿಗಳನ್ನು ನೋಡಿರಿ.

(14) ಆಗ ಅವರು ಅವರನ್ನು (ಸಂದೇಶವಾಹಕರನ್ನು) ನಿಷೇಧಿಸಿದರು ಮತ್ತು ಅದನ್ನು (ಒಂಟೆಯನ್ನು) ಕತ್ತು ಕೊಯ್ದು ಸಾಯಿಸಿದರು. ಆಗ ಅವರ ಪಾಪದ ನಿಮಿತ್ತ ಅವರ ರಬ್ ಅವರನ್ನು ನಾಶ ಮಾಡಿದನು ಮತ್ತು ಅದನ್ನು (ಅವರೆಲ್ಲರ ಮೇಲೂ) ಸಮಾನಗೊಳಿಸಿದನು.

(15) ಅದರ ಅನಂತರ ಫಲದ ಬಗ್ಗೆ ಅವನು ಭಯಪಟ್ಟಿಲ್ಲ.