(1) (ಓ ಪ್ರವಾದಿಯವರೇ!) ಹೇಳಿರಿ: ‘ಓ ಅವಿಶ್ವಾಸಿಗಳೇ!
(2) ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ.
(3) ನಾನು ಆರಾಧಿಸುವುದನ್ನು ನೀವೂ ಆರಾಧಿಸುವವರಲ್ಲ.
(4) ನೀವು ಆರಾಧಿಸುವುದನ್ನು ನಾನು ಆರಾಧಿಸುವವನಲ್ಲ.
(5) ನಾನು ಆರಾಧಿಸುವುದನ್ನು ನೀವೂ ಆರಾಧಿಸುವವರಲ್ಲ.
(6) ನಿಮಗೆ ನಿಮ್ಮ ಧರ್ಮ. ನನಗೆ ನನ್ನ ಧರ್ಮ’.(1435)
1435. ಓರ್ವ ಸತ್ಯವಿಶ್ವಾಸಿ ವಿಶ್ವಾಸ ಮತ್ತು ಆರಾಧನೆಗೆ ಸಂಬಂಧಿಸಿದಂತೆ ತನ್ನ ವ್ಯತಿರಿಕ್ತತೆಯನ್ನು ಕಾಪಾಡಬೇಕಾದವನಾಗಿದ್ದಾನೆ. ಏಕದೇವಾರಾಧನಾ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದೇ ಆರಾಧನಾ ಕ್ರಮವನ್ನೂ ಅವನು ಪಾಲಿಸಕೂಡದು.