103 - Al-Asr ()

|

(1) ಕಾಲದ ಮೇಲಾಣೆ!

(2) ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿಯೇ ಇರುವನು.(1428)
1428. ಜೀವನದ ಲಾಭ ನಷ್ಟಗಳ ಬಗ್ಗೆಯಿರುವ ಭೌತಿಕ ದೃಷ್ಟಿಕೋನವು ಎಲ್ಲ ಕಾಲದ ಮನುಷ್ಯರಿಗೂ ಸುಪರಿಚಿತವಾಗಿದೆ. ಆದರೆ ಭೌತಿಕ ಲಾಭಗಳು ತಾತ್ಕಾಲಿಕವಾಗಿವೆ. ಆತ್ಯಂತಿಕವಾದ ನಷ್ಟದಿಂದ -ಪರಲೋಕ ಶಿಕ್ಷೆಯಿಂದ- ರಕ್ಷೆ ಹೊಂದಲು ಅದು ನಮಗೆ ಸಹಾಯಕವಾಗದು. ಸತ್ಯವಿಶ್ವಾಸ ಮತ್ತು ಸತ್ಕರ್ಮ ಹಾಗೂ ಸತ್ಯ ಮತ್ತು ತಾಳ್ಮೆಯನ್ನು ಪಾಲಿಸುವುದಕ್ಕಾಗಿ ಮಾಡುವ ಉಪದೇಶ ಮಾತ್ರ ನಮ್ಮನ್ನು ಆತ್ಯಂತಿಕ ನಷ್ಟದಿಂದ ಕಾಪಾಡುವುದು.

(3) ಸತ್ಯವಿಶ್ವಾಸವಿಟ್ಟವರು, ಸತ್ಕರ್ಮವೆಸಗಿದವರು, ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಮತ್ತು ಸಹನೆಯನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರ ಹೊರತು.