(1) ಧರ್ಮವನ್ನು ಸುಳ್ಳಾಗಿಸುವವನು ಯಾರೆಂದು ತಾವು ಕಂಡಿರುವಿರಾ?
(2) ಅವನು ಅನಾಥನನ್ನು ಅಟ್ಟುವವನಾಗಿದ್ದಾನೆ.
(3) ಬಡವನ ಅನ್ನದ ವಿಷಯದಲ್ಲಿ ಅವನು ಪ್ರೇರಣೆ ನೀಡಲಾರನು.(1432)
1432. ಎಲ್ಲ ಕಾಲಗಳಲ್ಲೂ ಧರ್ಮ ನಿಷೇಧ ಮತ್ತು ಧರ್ಮನಿಷೇಧಿಗಳಿಗೆ ಬೆಂಬಲ ನೀಡುತ್ತಿರುವವರು ವಿಶ್ವಾಸವು ಹೃದಯಕ್ಕೆ ಇಳಿಯದೆ ಬಾಹ್ಯವಾಗಿ ಕೆಲವು ಧಾರ್ಮಿಕ ಆಚಾರಗಳಲ್ಲಿ ತಲ್ಲೀನರಾಗುವ ಜನರಾಗಿದ್ದಾರೆ. ಅನಾಥರ ಮತ್ತು ನಿರ್ಗತಿಕರ ರಕ್ಷಣೆಗೆ ಧಾವಿಸದೆ, ಅಸಡ್ಡೆಯೊಂದಿಗೆ ನಮಾಝ್ ಮಾಡುತ್ತಲೂ, ಚಿಕ್ಕ ಪುಟ್ಟ ಸೇವೆಗಳನ್ನು ಮಾಡಲೂ ಹೇಸುತ್ತಲೂ, ಭಕ್ತರ ಸೋಗು ಹಾಕುತ್ತಲೂ ಇರುವ ಕಪಟಿಗಳು ಧರ್ಮದ ವಿಶ್ವಾಸವನ್ನೇ ನಂದಿಸುವವರಾಗಿದ್ದಾರೆ.
(4) ಆದುದರಿಂದ ನಮಾಝ್ ನಿರ್ವಹಿಸುವವರಿಗೆ ನಾಶವಿದೆ.
(5) ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರಿಗೆ.
(6) ಜನರಿಗೆ ತೋರಿಸುವುದಕ್ಕಾಗಿ ಕರ್ಮವೆಸಗುವವರಿಗೆ.
(7) ಪರೋಪಕಾರಿ ವಸ್ತುಗಳನ್ನು(1433) ತಡೆದಿರಿಸುವವರಿಗೆ.
1433. ಪರೋಪಕಾರ ಮಾಡುವ ಮನಸ್ಥಿತಿಯನ್ನು ಹೊಂದಿರುವ ಜನರು ಪರಸ್ಪರ ಎರವಲು ನೀಡುವ ಗೃಹೋಪಯೋಗಿ ವಸ್ತುಗಳು.