106 - Quraish ()

|

(1) ಕುರೈಶ್ ಜನಾಂಗವನ್ನು ಬೆಸೆದಿರುವ ಕಾರಣದಿಂದ.

(2) ಚಳಿಗಾಲ ಹಾಗೂ ಬೇಸಿಗೆ ಕಾಲದ ಯಾತ್ರೆಯ ಮೂಲಕ ಅವರನ್ನು ಬೆಸೆದಿರುವ ಕಾರಣದಿಂದ.

(3) ಈ ಭವನದ ರಬ್ಬನ್ನು ಅವರು ಆರಾಧಿಸಲಿ.

(4) ಅವರು ಹಸಿದಿರುವಾಗ ಆಹಾರವನ್ನು ಒದಗಿಸಿದ ಮತ್ತು ಭಯಕ್ಕೆ ಬದಲಾಗಿ ಅವರಿಗೆ ನಿರ್ಭೀತಿಯನ್ನು ಕರುಣಿಸಿದ ರಬ್ಬನ್ನು.(1431)
1431. ಕುರೈಶೀ ಜನಾಂಗವು ಅರೇಬಿಯಾದ ಉನ್ನತ ವಂಶದವರಾಗಿದ್ದರು. ಈ ಜನಾಂಗಕ್ಕೆ ಸೇರಿದ ಬನೂ ಹಾಶಿಮ್ ಮನೆತನದಲ್ಲಿ ಪ್ರವಾದಿ(ಸ) ರವರು ಜನಿಸಿದ್ದರು. ಅರಬರು ಮಕ್ಕಾ ಪಟ್ಟಣಕ್ಕೆ ಪಾವಿತ್ರ್ಯತೆ ಕಲ್ಪಿಸಿದ್ದರು. ಅಲ್ಲಿ ಯುದ್ಧ, ದಾಳಿ ಇತ್ಯಾದಿಗಳನ್ನು ಅವರು ನಿಷಿದ್ಧವೆಂದು ಸಾರಿದ್ದರು. ಆದ್ದರಿಂದಲೇ ಮಕ್ಕಾ ನಿವಾಸಿಗಳಾದ ಕುರೈಶರು ಯುದ್ಧ ಮತ್ತು ದಾಳಿಗಳಿಂದ ಸುರಕ್ಷಿತರಾಗಿದ್ದರು. ಪವಿತ್ರ ಕಅ್‌ಬಾಲಯದ ಪರಿಪಾಲಕರು ಎಂಬ ನಿಟ್ಟಿನಲ್ಲಿ ಅವರಿಗೆ ಅರೇಬಿಯಾದ್ಯಂತ ಗೌರವ ಮತ್ತು ಸ್ಥಾನಮಾನ ಲಭ್ಯವಾಗಿತ್ತು. ಆದ್ದರಿಂದಲೇ ಅವರ ವ್ಯಾಪಾರ ಯಾತ್ರೆಯು ಸುರಕ್ಷಿತ ಮತ್ತು ಲಾಭಕರವಾಗಿತ್ತು. ಅವರ ಪ್ರಮುಖ ಅನ್ನಾಧಾರ ಮಾರ್ಗವು ಬೇಸಿಗೆಯಲ್ಲಿ ಸಿರಿಯಾದತ್ತ ಮತ್ತು ಚಳಿಗಾಲದಲ್ಲಿ ಯಮನ್‍ನತ್ತ ಚಲಿಸುತ್ತಿದ್ದ ವ್ಯಾಪಾರ ಯಾತ್ರೆಯಾಗಿತ್ತು. ಹೀಗೆ ಅವರಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟಿರುವ ಅಲ್ಲಾಹುವನ್ನು -ಕಅ್‌ಬಾಲಯದ ಒಡೆಯನನ್ನು- ಮಾತ್ರ ಆರಾಧಿಸಲು ಅವರು ಬಾಧ್ಯಸ್ತರಾಗಿದ್ದಾರೆಂದು ಅಲ್ಲಾಹು ನೆನಪಿಸುತ್ತಿದ್ದಾನೆ.