108 - Al-Kawthar ()

|

(1) ಖಂಡಿತವಾಗಿಯೂ ನಾವು ತಮಗೆ ಹೇರಳ ಒಳಿತನ್ನು ದಯಪಾಲಿಸಿರುವೆವು.

(2) ಆದ್ದರಿಂದ ತಾವು ತಮ್ಮ ರಬ್‌ಗಾಗಿ ನಮಾಝ್ ಮಾಡಿರಿ ಮತ್ತು ಬಲಿಯರ್ಪಿಸಿರಿ.

(3) ಖಂಡಿತವಾಗಿಯೂ ತಮ್ಮೊಂದಿಗೆ ಶತ್ರುತ್ವ ಹೊಂದಿರುವವನೇ ಬೇರು ಕಡಿದುಹೋದವನಾಗಿರುವನು. (ಭವಿಷ್ಯವಿಲ್ಲದವನಾಗಿರುವನು).(1434)
1434. ಪ್ರವಾದಿ(ಸ) ರಿಗೆ ಗಂಡು ಮಕ್ಕಳಿಲ್ಲದ ಕಾರಣ ಶತ್ರುಗಳು ಅವರನ್ನು ‘ಅಬ್ತರ್’ (ಬೇರು ಕಡಿದು ಹೋದವನು) ಅಥವಾ ಉತ್ತರಾಧಿಕಾರಿಯಿಲ್ಲದವನು ಎಂದು ಕರೆದು ಲೇವಡಿ ಮಾಡುತ್ತಿದ್ದರು. ಇದನ್ನು ಖಂಡಿಸಿ ಪ್ರವಾದಿ(ಸ) ರೊಂದಿಗೆ ಶತ್ರುತ್ವ ಹೊಂದಿರುವವನೇ ‘ಅಬ್ತರ್’ ಅಥವಾ ಭವಿಷ್ಯವಿಲ್ಲದವನು ಎಂದು ಅಲ್ಲಾಹು ಹೇಳಿದ್ದಾನೆ.