114 - An-Naas ()
|
(1) ಹೇಳಿರಿ: ‘ಮನುಷ್ಯರ ರಬ್‌ನೊಂದಿಗೆ ನಾನು ಅಭಯವನ್ನು ಬೇಡುತ್ತಿರುವೆನು.
(2) ಮನುಷ್ಯರ ಅಧಿಪತಿಯೊಂದಿಗೆ.
(3) ಮನುಷ್ಯರ ಆರಾಧ್ಯನೊಂದಿಗೆ.
(4) ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ ಕೆಡುಕಿನಿಂದ.
(5) ಅಂದರೆ ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು.
(6) ಜಿನ್ನ್ ಹಾಗೂ ಮನುಷ್ಯರಲ್ಲಿ ಸೇರಿದವರು’.