(1) ಭೂಮಿಯನ್ನು ಕಂಪಿಸಲಾಗುವಾಗ. ಅದರ ಭಯಾನಕವಾದ ಆ ಕಂಪನ.
(2) ಭೂಮಿಯು ಅದರ ಭಾರಗಳನ್ನು ಹೊರ ತಳ್ಳುವಾಗ.
(3) ‘ಅದಕ್ಕೇನಾಯಿತು?’ ಎಂದು ಮನುಷ್ಯನು ಹೇಳುವಾಗ.(1422)
1422. ಅಂತ್ಯದಿನದಂದು ಜರಗುವ ಘಟನೆಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ.
(4) ಆ ದಿನದಂದು ಅದು (ಭೂಮಿಯು) ತನ್ನ ವೃತ್ತಾಂತಗಳನ್ನು ತಿಳಿಸಿಕೊಡುವುದು.
(5) ತಮ್ಮ ರಬ್ ಅದಕ್ಕೆ ಸಂದೇಶ ನೀಡಿದ ನಿಮಿತ್ತ.
(6) ಅಂದು ಮನುಷ್ಯರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ ಅವರು ಹಲವು ಗುಂಪುಗಳಾಗಿ ಹೊರಡುವರು.
(7) ಆಗ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿರುವನೋ ಅವನು ಅದನ್ನು ಕಾಣುವನು.
(8) ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.(1423)
1423. ಮನುಷ್ಯನು ಇಹಲೋಕದಲ್ಲಿ ಮಾಡಿದ ಅತಿಕ್ಷುಲ್ಲಕ ಕರ್ಮಗಳಿಗೂ ಅಲ್ಲಾಹು ಪರಲೋಕದಲ್ಲಿ ನಿಖರವಾದ ಪ್ರತಿಫಲವನ್ನು ನೀಡುವನು ಎಂದರ್ಥ.